ಮಾಲಿನ್ಯ ರಹಿತ ಪ್ಲಾಸ್ಟಿಕ್

ಈಗಿರುವ ಪ್ಲಾಸ್ಟಿಕ್ ವಾಯುಮಾಲಿನ್ಯ, ಜಲಮಾಲಿನ್ಯ, ಮಾಡುತ್ತ ಮನುಕುಲಕ್ಕೆ ಮಾರಕವಾಗಬಲ್ಲದೆಂದು ಎಲ್ಲರಿಗೂ ಗೊತ್ತಿರುವ ವಿಷಯ. ಎಷ್ಟು ವರ್ಷಗಳಾದರೂ ಮಣ್ಣಿನಲ್ಲಿ ಕರಗದ ಈ ಪ್ಲಾಸ್ಟಿಕ್ ಅಸಂಖ್ಯಾತ ಮೂಕ ಪ್ರಾಣಿಗಳ ಬಲಿ ತೆಗೆದುಕೊಂಡಿದ್ದರೆ, ಭೂಮಿಯನ್ನು ಶುಷ್ಕಗೊಳಿಸುವಲ್ಲಿ ಅತಂಕಗೊಳಿಸಿ ಸಸ್ಯಗಳ ಬೆಳವಣಿಗೆ- ಯಾದಂತೆ ಮಾಡುತ್ತಿರುವುದೊಂದು ದುರಂತ. ಈ ಕಾರಣವಾಗಿ ಪರಿಸರಕ್ಕೆ ಮಾರಕವಾಗದೇ ಇರುವ ಮತ್ತು ಈಗಿನ ಪ್ಲಾಸ್ಟಿಕ್‌ನಂತೆ ಪಾರದರ್ಶಕವಾಗಿರುವ ಹೊಸ ಆವಿಷ್ಕಾರದ ಶೋಧನೆಯನ್ನು ವಿಜ್ಞಾನಿಗಳು ಮಾಡುತ್ತಲೇ
ಬರುತ್ತಿದ್ದಾರೆ.

ಕ್ರಿ.ಶ. 1879ರಲ್ಲಿಯೇ ಮಣ್ಣಿನಲ್ಲಿ ಕರಗಿ ಹೋಗುವ ಸಕ್ಕರೆಯ ಕಣಗಳಿಂದ ತಯಾರಿಸಿದ ಪ್ಲಾಸ್ಟಿಕ್ ಅನ್ನು ಅಮೇರಿಕದ ಮುದ್ರಕರೊಬ್ಬರು ಮೊಟ್ಟ ಮೊದಲ ಬಾರಿಗೆ ತಯಾರಿಸಿದ್ದರು. ಇದು ಬೆಳವಣಿಗೆ ಹೊಂದುವುದರಲ್ಲಿಯೇ 1909ರಲ್ಲಿ ಪೆಟ್ರೋಲಿಯಂ ಆಧಾರಿತ ಕೃತಕ ಪ್ಲಾಸ್ಟಿಕ್ ಬಂದ ನಂತರ ಮೊದಲಿನ ಪ್ಲಾಸ್ಟಿಕ್ ಮೂಲೆ ಗುಂಪಾಗಿ ಹೋಯಿತು.
ನಂತರ ಇದೇ ಒಂದು ಪರಿಸರಕ್ಕೆ ಮಾರಕವಾಗಿ ಕಾಡತೊಡಗಿತು.

ಸರಳವಾದ ಕ್ರಾಂತಿಕಾರಿ ತಂತ್ರ ಬಳಸಿ ಪ್ಲಾಸ್ಟಿಕ್ ತಯಾರಿಸಿದಲ್ಲಿ ಈ ಭೂಖಂಡ ಬಚಾವಾಗುವುದೆಂದು ಅರಿತ ವಿಜ್ಞಾನಿಗಳು “ಅಲ್ಕಾನಿಗೇನಿಸ್” ಒಂದು ಜಾತಿಯ ಬ್ಯಾಕ್ಟೀರಿಯಾದ ದೇಹದಲ್ಲಿ ಪ್ಲಾಸ್ಟಿಕ್‌ನಂತಹ ವಸ್ತುಸಂಗ್ರಹ- ವಾಗುತ್ತದೆಂದು ತಿಳಿಯಿತು. ಈ ಏಕಕೋಶ ಜೀವಿಗಳಲ್ಲಿ ತಮ್ಮ ತೂಕದ ಶೇಕಡ 99 ಭಾಗ ಪ್ಲಾಸ್ಟಿಕ್ ಜಿಗುಟು ದ್ರವ ಇದೆ ಎಂದು ವರ್ಜಿನಿಯಾದ ವಿಜ್ಞಾನಿಗಳು ಕಂಡುಹಿಡಿದರು. ಈ ಬ್ಯಾಕ್ಟೀರಿಯಾಗಳ ವಂಶವಾಹಿನಿಯನ್ನು ಅಭಿವೃದ್ಧಿ ಪಡಿಸಿ ಅಗತ್ಯವಿರುವಷ್ಟು ಪ್ಲಾಸ್ಟಿಕ್ ತಯಾರಿಸಬಹುದು. ಈ ತಂತ್ರವನ್ನು ಅಮೇರಿಕಾದಂತಹ ದೇಶವು ಹಿಂದುಳಿದ ರಾಷ್ಟ್ರಗಳಿಗ ಬಿಟ್ಟು ತೊಡದೇ ತಮ್ಮ ಹಳೆ ತಂತ್ರಜ್ಞಾನವನ್ನೇ ಸಾಗುಹಾಕುತ್ತದಾದ್ದರಿಂದ ಈಗಿನ ಪ್ಲಾಸ್ಟಿಕ್ ಸುಗ್ಗಿ ಹೆಚ್ಚಿ ಪರಿಸರ ನಾಶವಾಗುತ್ತಿರುವುದು. ಮುಂದೊಂದು ದಿನ ಈ ಹೊಸ ಫಲಶೃತಿಯನ್ನು ಅನುಭವಿಸುವ
ಕಾಲವೂ ಬರಬಹುದು.

ಇನ್ನೊಂದು ಸಂತೋಷದ ಸುದ್ದಿ ಎಂದರೆ ಜೋಳದ ತೆನೆಯಿಂದ ಹಾಗೂ ಕಾಳುಗಳಿಂದ ಮಣ್ಣಿನಲ್ಲಿ ಒಂದಾಗುವ ಪ್ಲಾಸ್ಟಿಕ್ ಅನ್ನು ತಯಾರಿಸಿಬುದೆಂದು ಇನ್ನೊಂದೆಡೆ ವಿಜ್ಞಾನಿಗಳು ಕಂಡುಹಿಡಿದಿದ್ದಾರೆ. ಅಮೇರಿಕಾದ ರಾಷ್ಟ್ರೀಯ ಪ್ರಯೋಗ ಶಾಲೆಯಲ್ಲಿ ಅಲೂಗಡ್ಡೆ ಸಿಪ್ಪೆಯಿಂದ ಪ್ಲಾಸ್ಟಿಕ್‌ನ್ನು ಈಗಾಗಲೇ ತಯಾರಿಸುತ್ತಿದ್ಧಾರೆ. ಉತ್ತರ ಭೂಭಾಗದಲ್ಲಿ ವಾಸಿಸುವ ಜನರು ರಾಶಿ ರಾಶಿ ಆಲೂಗಡ್ಡೆಯನ್ನು ತಿನ್ನುತ್ತಾರೆ ಮತ್ತು ಬಹುತೇಕ ಕಡೆ ಆಲೂಗಡ್ಡೆ- ಯನ್ನು ಯತೇಚ್ಚವಾಗಿ ಬೆಳೆಯಲಾಗುತ್ತದೆ. ಈ ಸಿಪ್ಪೆಯನ್ನೆಲ್ಲ ಪ್ಲಾಸ್ಟಿಕ್ ತಯಾರಿಸಲು ಬಳಸಿದರೆ ಇಂದಿನ ಪರಿಸರ
ಮಾಲಿನ್ಯದ ಸಮಸ್ಯೆಗ ಉತ್ತರ ಸಿಗಬಹುದು. ಇದು ಜೈವಿಕ ಪ್ಲಾಸ್ಟಿಕ್ ತಯಾರಿಸುವ ತಂತ್ರವಾಗಿದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಯಾರೋ ತಾಪಸಿ ನೀನು ?*
Next post ಹೆಣ್ಣು ಬಣ್ಣದ ಅಗತ್ಯ

ಸಣ್ಣ ಕತೆ

  • ಗದ್ದೆ

    ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…

  • ಹೃದಯ ವೀಣೆ ಮಿಡಿಯೆ….

    ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ… Read more…

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…

  • ಹಳ್ಳಿ…

    ಬಂಗಾರ ಬಣ್ಣದ ಕಾರು, ವೇಗವಾಗಿ... ಅತಿವೇಗವಾಗಿ, ಓಡುತ್ತಿತ್ತು. ರೆವ್ರೊಲೆ ಆವಿಯೊಯು-ವಾ-ಹೊಚ್ಚ ಹೊಸ ಮಾದ್ರಿಯ ಹೊರ, ಒಳಗೆ, ಬಲು ವಿಶಿಷ್ಠ, ವಿನೂತನ, ವಿನ್ಯಾಸದ, ಎಬಿ‌ಎಸ್ ಸಿಸ್ಟಮ್ ಕಾರೆಂದರೆ ಕೇಳಬೇಕೆ?… Read more…

  • ದಾರಿ ಯಾವುದಯ್ಯಾ?

    ಮೂವತೈದು ವರ್‍ಷಗಳ ನಂತರ ಅಮಲ ನಿನ್ನೂರಿಗೆ ಬರುತ್ತಿದ್ದೇನೆ ಅಂತ ಫೋನ ಮಾಡಿದಾಗ ಮೃಣಾಲಿನಿಗೆ ಆಶ್ಚರ್‍ಯ ಮತ್ತು ಆತಂಕ ಕಾಡಿದವು. ಬರೋಬ್ಬರಿ ಮೂವತ್ತೈದು ವರ್ಷಗಳ ಹಿಂದೆ ವಿಶ್ವವಿದ್ಯಾಲಯದ ಕ್ಯಾಂಪಸ್… Read more…

cheap jordans|wholesale air max|wholesale jordans|wholesale jewelry|wholesale jerseys